Tag Archives: kavana

*ನೀನು*

ಪ್ರತಿಬಾರಿ ನೆನೆದಾಗ ತುಟಿಯಂಚಲಿ ಮೂಡುವ ಮುಗುಳ್ನಗು ನೀನು ಕಣ್ಮಿಂಚು ನೀನು ಎಂದೆಂದೂ ಮರೆಯಲಾಗದ ನೆಚ್ಚಿನ ಗೀತೆ ನೀನು ಮುಂಜಾವಿನ ಕನವರಿಕೆ ನೀನು ಮುಸ್ಸಂಜೆಯ ತಿಳಿ ಮೌನ ನೀನು ಕಾನನದ ಏಕಾಂತ ನೀನು ನನ್ನೊಳಗಿನ ಪ್ರತಿಧ್ವನಿ ನೀನು ನನ್ನಂತರಂಗದ ಪ್ರತಿಫಲನ ನೀನು ನನ್ನೆಲ್ಲ ಮೌನದ ಮಾತು ನೀನು ಮುಂಗುರುಳ ಸಲುಗೆ ನೀನು ಜೀವದ ಬೆಸುಗೆ ನೀನು ಜೀವನಕೆ … Continue reading

Posted in ಇದು ಹೃದಯಗಳ ವಿಷಯ | Tagged , , | Leave a comment

*ಅದರುತಿರುವ ಅಧರಗಳಿಗೆ*

ಇನಿಯನೆದೆಗೆ ಒರಗಿ ಕೂತು ಎದೆಯ ದನಿಗೆ ಲೋಕ ಮರೆತು ಬೆರಳ ಒಳಗೆ ಬೆರಳು ಬೆಸೆದು ಕಣ್ಣು ಮುಚ್ಚಿ ಮನಸು ತೆರೆದು ಮಾತನೆಲ್ಲ ಮೂಟೆಕಟ್ಟಿ ಮೌನದಲ್ಲಿ ಮೌನ ಬೆರೆತು ತಂಗಾಳಿಗೆ ಮುಂಗುರುಳು ಸೋತು ಮನ ಸಂತಸದಿ ತೇಲುತಿತ್ತು ಇನಿಯನೆದೆಬಡಿತದ ಏರಿಕೆಗೆ ಇದ್ದಕ್ಕಿದ್ದಂತೆ ಬಿಗಿಯಾದ ಅಪ್ಪುಗೆಗೆ ಅದರುತಿರುವ ಅಧರಗಳ ಇನಿಯನ ಚುಂಬಿಸುವ ಬಯಕೆಗೆ ಉತ್ತುಂಗಕ್ಕೇರುವ ಒಲವ ತವಕಕೆ ಅನಿಸತೊಡಗಿತು … Continue reading

Posted in ಇದು ಹೃದಯಗಳ ವಿಷಯ | Tagged , , , , | Leave a comment

*ವಿಪರ್ಯಾಸ*

ಅಂದ? ಚೆಂದ? ಅಂದ-ಚೆಂದ ಬರಿ ಚರ್ಮದಾಳಕ್ಕೆ! ಬಾಹ್ಯ ಸೌಂದರ್ಯ ಬರಿ ಕಣ್ಣಿನಾಳಕ್ಕೆ! ಅಂದಿದ್ದರು ಅವರೆಲ್ಲರೂ ಹಲವು ಬಾರಿ ನಾ ನಕ್ಕಿದ್ದೆ. ಪ್ರತಿ ಬಾರಿಯೂ ನಾ ಸುಮ್ಮನೆ ನಕ್ಕಿದ್ದೆ! ನಗುವಿನಿಂದಿನ ವ್ಯಂಗ್ಯ ಅವರಿಗೆ ತಿಳಿವುದಾದರೂ ಹೇಗೆ? ಹ್ಞಾ! ವ್ಯಂಗ್ಯ ನಗುವಲ್ಲದೆ ಮತ್ತೇನು? ನಿಯತಕಾಲಿಕೆಗಳಲಿ ಬರುವ ರೂಪದರ್ಶಿಕೆಯರ ಅಂದ-ಚೆಂದ ಮೈಮಾಟಕ್ಕೆ ಮನಸೋತು ಗಂಟೆಗಟ್ಟಲೆ ಮನದಲ್ಲೇ ಜೊಲ್ಲುಸುರಿಸುವವರು ಬಾಹ್ಯ ಸೌಂದರ್ಯ … Continue reading

Posted in ಈ ಸಮಯ ಕಾವ್ಯಮಯ | Tagged , , , | Leave a comment

*ಮರೆವು*

ನೆನಪಾಗುತ್ತಾಳೆ ಅವಳು ಮಳೆ ಬಂದಾಗ ನೆನಪಾಗುತ್ತಾಳೆ ಅವಳು ನವಿಲುಗರಿ ಕಂಡಾಗ ಇನ್ನೂ ಕಾಡುತ್ತಾಳೆ ಅವಳು ನಡುರಾತ್ರಿ ಕನಸಲ್ಲಿ ಕೆಲವೊಮ್ಮೆ ಮುಂಜಾನೆಯ ಕನವರಿಕೆಯಲ್ಲಿ ದಿನಚರಿಯ ಪುಟಗಳ ನಡುವೆ ಒಣಗಿದ ಎಲೆಗಳು ನೆನಪು ಮಾತ್ರ ಇನ್ನೂ ಹಸಿರಸಿರು ಹಳೇ ಪ್ರೇಮಪತ್ರಗಳು ಉಡುಗೊರೆಗಳಿಗೆ ಕಣ್ಣೀರ ಸಿಂಚನ ಕೆಲಕಾಲ ನಿಟ್ಟುಸಿರು ಹೇ ದೇವ, ದಯಪಾಲಿಸೆನಗೆ ಶಾಶ್ವತ ಮರೆವ ಮರೆತು ಕೂಡ ನೆನಪಾಗದಿರಲಿ … Continue reading

Posted in ಇದು ಹೃದಯಗಳ ವಿಷಯ | Tagged , , , , | 1 Comment

*ವಿಶ್ವ ಕವಿತೆ ದಿನದಂದು: *ಸ್ವಲ್ಪ ನಿಲ್ಲು…*

ಕಾಲಿಲ್ಲ ನಿನಗೆ ಆದರೂ ನಾಗಾಲೋಟ ಪ್ರತಿಸ್ಪರ್ಧಿಗಳೇ ಇಲ್ಲ ನಿನಗೆ ಜೀವನವೆಂಬ ಸ್ಪರ್ಧೆಯಲ್ಲದ ಸ್ಪರ್ಧೆಯಲಿ ಗೆಲುವು ಸದಾ ನಿನದೆ! ಸೂರ್ಯ ಚಂದ್ರರೇ ರಜೆ ಹೋಗುವರು ಒಮ್ಮೊಮ್ಮೆ ಮೋಡ ಮಳೆಗು ಮನಸಿಲ್ಲದಿರೆ ಭೂಮಿ ಬರಡು! ನೀ ಮಾತ್ರ ಭಿನ್ನ ಅಲ್ಪವಿರಾಮಕ್ಕೂ ನೀ ಒಲ್ಲೆ ರಜೆ ದೂರದ ಮಾತು! ಒಮ್ಮೊಮ್ಮೆ ನನಗೇಕೊ ಸಂದೇಹ ಬೇಜಾರೆಂಬ ಪದವೇ ನಿನ್ನ ಪದಕೋಶದಲ್ಲಿಲ್ಲವಾ? ಆಯಾಸದ … Continue reading

Posted in ಈ ಸಮಯ ಕಾವ್ಯಮಯ | Tagged , , | 1 Comment

*’ನಾವೆಂಬ’ ಕನಸು*

ಅಂದು… ನಿನ್ ಹೆಸರೊಂದೇ ಸಾಕಿತ್ತು ಮನ ಗರಿಗೆದರಿದ ನವಿಲಂತೆ ನರ್ತಿಸುತ್ತಿತ್ತು ಮಳೆಬಿಲ್ಲತೊಟ್ಟ ಮುಗಿಲಂತೆ ಹೃದಯ ಕಂಗೊಳಿಸುತ್ತಿತ್ತು ಆಹಾ! ಪ್ರೀತಿ… ಜಗದ ಸುಂದರ ಪದ ಆಹಾ!ಒಲವು… ಸೃಷ್ಟಿಯ ಅದ್ಭುತ ಭಾವ ಇಂದು… ನಿನ್ ಹೆಸರೊಂದೇ ಸಾಕೀಗ ಮನದಿ ಅದುಮಿಟ್ಟ ಜ್ವಾಲಾಮುಖಿ ಸ್ಫೋಟಿಸಲು ನೆನಪುಗಳ ಸರಮಾಲೆ ಕಣ್ಣೀರ ಜಡಿಮಳೆ ಲೋಕ ಹೇಳಿದ್ದು ನಿಜ ಪ್ರೀತಿ ಮಾಯೆ! ಪ್ರೀತಿ ಮಾಯೆ! … Continue reading

Posted in ಇದು ಹೃದಯಗಳ ವಿಷಯ | Tagged , , , | 4 Comments

*ಸತ್ಯ ನೀನು…*

ತಾಯಿಯ ಗರ್ಭದಿಂದಲೇ ಬೆಸೆಯಿತು ನಮ್ಮಿಬ್ಬರ ನಡುವೆ ಬೆಸುಗೆ ಅಂದಿನಿಂದ ಇಂದಿನವರೆಗೆ ನೀನನ್ನನಾವರಿಸದ ಇರುಳುಗಳು ವಿರಳ ಕೆಲವೊಮ್ಮೆ ಹಗಲಲ್ಲೂ ನಾ ನಿನಗೆ ಶರಣಾಗುವ ಪರಿ ಬಹಳ ಸರಳ! ಕನಸೆಂಬ ಕೌತುಕಕೆ ಕೀಲಿಕೈ ನೀನು ಒಮ್ಮೊಮ್ಮೆ ದುಃಸ್ವಪ್ನಗಳ ಆಗರ ಹಸುಗೂಸಿನಿಂದಿಡಿದು ವಯೋವೃದ್ಧರವರೆಗೂ ಯಾರೂ ದ್ವೇಷಿಸದ ಅಜಾತಶತ್ರು ನೀನು ನಿನ್ನ ಬರುವಿಕೆಗೆ ಸೂಚನೆ ಆಕಳಿಕೆ ತೂಕಡಿಕೆ ಪ್ರೇಮಿಗಳಿಗೆ ಮಾತ್ರ ಕೆಲ … Continue reading

Posted in ಈ ಸಮಯ ಕಾವ್ಯಮಯ | Tagged , | 2 Comments

*ಕಾರಣ ನೀ-ನಲ್ಲ…*

ಅತ್ತು ಅತ್ತು ಕಣ್ಣೀರು ಬತ್ತಿ ಹೋದರು ನಿನ್ನುತ್ತರದ ನಿರೀಕ್ಷೆ ಇನ್ನೂ ಸತ್ತಿಲ್ಲ ಹುಚ್ಚು ಮನಸೆ ಮರೆತುಬಿಡು ಎಂದಷ್ಟು ಹೆಚ್ಚೆಚ್ಚು ಕಾಡುವುದು ನಿನ್ನ ನೆನಪು ಕಾಡುವ ನೆನಪುಗಳು ಹುಸಿ ನಿರೀಕ್ಷೆಗಳ ನಡುವೆ ಕೊಚ್ಚಿ ಹೋಗುವುದೇ ಬದುಕು? ಇದಕೆಲ್ಲ ಕಾರಣ ನೀನಲ್ಲ ನೀ-‘ನಲ್ಲ’ ಹಗಲು ಇರುಳುಗಳ ಅರಿವಿಲ್ಲದ ಮನಕೆ ಸದಾ ನಿನ್ನದೆ ಜಪ ಬರಡು ಹೃದಯದಲ್ಲಿ ಒಲವ ಚಿಗುರೊಡೆಸಿ … Continue reading

Posted in ಇದು ಹೃದಯಗಳ ವಿಷಯ | Tagged , , | 2 Comments

*ಕನ್ನಡಿ*

ಬರೆದೂ ಬರೆದು ಆಲೋಚನೆಗಳೇ ಬರಿದಾದವು ಮನದ ತುಂಬೆಲ್ಲಾ ಬರೀ ಮರಳು ಬರಿ ಎಂದರೆ ಬರೆಯಲಿ ಹೇಗೆ ನಾ? ಬರೆವುದಾದರು ಏನ ನಾ? ಕಣ್ತೆರೆದು ಕಂಡ ಅದೆಷ್ಟೋ ಕನಸುಗಳು ಅಂತರ್ಮುಖಿಯ ಒಂದಷ್ಟು ಸ್ವಗತಗಳು ಮರೆತಿದ್ದ ಕೆಲವು ನೆನಪುಗಳು ನೆನಪಾದ ಮರೆತಿದ್ದ ನೆನಪುಗಳು ಕವಿತೆಗಳಾದವು ಪುಸ್ತಕವಾದವು ಅಪರಿಪೂರ್ಣ ಹೊತ್ತಿಗೆಯೊಂದು ಬಿಕ್ಕುತಿದೆ ರೋಧಿಸುತ ಶೀರ್ಷಿಕೆ ಇಲ್ಲದ ಪರಿವಿಡಿ ಇಲ್ಲದ ಮುನ್ನುಡಿ … Continue reading

Posted in ಈ ಸಮಯ ಕಾವ್ಯಮಯ | Tagged , , | 2 Comments

*ಹೇಗೆ?*

Posted in Uncategorized | Tagged , , , | Leave a comment