Monthly Archives: July 2014

*ಭ್ರಮೆಯೊ ಅಥವಾ ಬದುಕೊ?*

ಕಾಮನಬಿಲ್ಲಿನ ಬಣ್ಣಗಳ ಕದ್ದು ಕಣ್ಣರೆಪ್ಪೆಗಳ ಕುಂಚವಾಗಿಸಿ ಭಾವನಾಲೋಕದ ಬಿಳಿ ಹಾಳೆಯೊಂದರ ಮೇಲೆ ನಾ ಬರೆಯಲಾರಂಭಿಸಿದ ಚಿತ್ರವಿನ್ನು ಪೂರ್ತಿಯಾಗಿಲ್ಲ… ಕಾರಣ, ಬಣ್ಣಗಳ ಕೊರತೆ! ಖಾಲಿಯಾದ ಬಣ್ಣಗಳ ಮತ್ತೊಮ್ಮೆ ಪಡೆದು ಚಿತ್ರ ಪೂರ್ಣಗೊಳಿಸಲು ಮತ್ತೊಮ್ಮೆ ಕಾಮನಬಿಲ್ಲಿನ ಬರುವಿಕೆಗಾಗಿ ಕಾಯುವುದು ಭ್ರಮೆಯೊ ಅಥವಾ ಬದುಕೊ?

Posted in ಈ ಸಮಯ ಕಾವ್ಯಮಯ | Leave a comment

*ಪಯಣ*

            ಮನಸಿನ ತುಡಿತ ಕಲ್ಪನಾಲೋಕದೆಡೆಗೆ ಹೃದಯದ ಮಿಡಿತ ವಾಸ್ತವದ ಕಡೆಗೆ ಕಲ್ಪನಾಲೋಕಕೆ ಒಗ್ಗಿಹೋಗಿದೆ ಮನಸು ಹೃದಯಕ್ಕೆ ಮಾತ್ರ ವಾಸ್ತವದ ಚಿಂತೆ!   ಮನಸು ಹೃದಯಗಳ ನಡುವಿನ ಮೂಕ ಸಂಧಾನದಲಿ, ಹೃದಯ, ಮನಸಿಗೆ ಸೋತಂತಿದೆ! ವಾಸ್ತವದ ಜಂಜಾಟಕಿಂತ, ಕಲ್ಪನೆಗಳ ಮಾಯಾಲೋಕಕೆ ಮನಸು-ಹೃದಯಗಳೆರಡು ಬೆರಗಾದಂತಿವೆ!   ಸಾಗುತಿದೆ ಪಯಣ ಕಲ್ಪನಾಲೋಕದೆಡೆಗೆ ಹಾಕುತ … Continue reading

Posted in ಈ ಸಮಯ ಕಾವ್ಯಮಯ | Leave a comment