*ಸಮಯದ ತಿರುವು*

ಹೀಗೆ ಕೆಲವು ವರುಷಗಳ ಹಿಂದೆ…
‘ಸರಿಯಾಗಿ ನೆನಪಿಲ್ಲ’ ಎಂದು ಹೇಳುವಷ್ಟು
ವರುಷಗಳ ಹಿಂದೆಯಲ್ಲ.
ಕೆಲವೇ ಕೆಲವು ವರುಷಗಳ ಹಿಂದೆ,
ಮೂರ್ನಾಲ್ಕು ವರುಷಗಳ ಹಿಂದೆ,
ಆ ‘ಧನಿ’ ಸೂಜಿಗಲ್ಲಿನಂತೆ ನನ್ನನ್ನು ಸೆಳೆಯುತ್ತಿತ್ತು.
ಒಂದು ದೂರವಾಣಿ ಕರೆಗಾಗಿ…
‘ಒಳಕರೆ’ಗಾಗಿ
ಮನಸು ಹವಣಿಸುತ್ತಿತ್ತು.
ನಾನೇ ಕರೆ ಮಾಡಬಹುದಿತ್ತೇನೊ!
ನನ್ನೊಳಗಿನ ‘ಅಹಂ’ ಬಿಡಬೇಕಲ್ಲ!
ಅದೆಂಥದೊ ಮೋಡಿ ಆ ಧನಿಯಲ್ಲಿ
ಆ ಸಂಭಾಣೆಗಳು…ಮಾಯಾಜಾಲವೇ ಸರಿ
ಆತ್ಮೀಯತೆಯಲ್ಲದ ಆತ್ಮೀಯತೆ ಅದು

ಸ್ನೇಹವಲ್ಲ

ಪ್ರೀತಿಯಲ್ಲ

ಆಕರ್ಷಣೆಯಲ್ಲ

ಅದೇನದು?

ನನಗಿಂದಿಗೂ ತಿಳಿದಿಲ್ಲ
ಅರಿಯುವ… ತಿಳಿಯುವ
ಆಲೋಚನೆಗಳು ಖಂಡಿತ ಇಲ್ಲ
ಆ ಧನಿಯ ನೆನಪೇ
ಸ್ಮೃತಿ ಪಟಲದಿಂದ ಅಳಿಸಿ ಹೋಗಿತ್ತು
ಆ ವ್ಯಕ್ತಿ…ಆ ಭೇಟಿ…ಆ ಕ್ಷಣಗಳು
ಆ ಧನಿ…ಆ ನಗು… ಆ ಸಂಭಾಷಣೆಗಳು
ಕನಸೇ ಇದ್ದಿರಬೇಕು
ಅನ್ನುವಷ್ಟು ದೂರ
ಬದುಕು ಮುಂದೆ ಸಾಗಿತ್ತು
ಆಗ ಬಂತೊಂದು ಕರೆ
ಯುಗಗಳ ಹಿಂದೆ ಕೇಳಿದ್ದ
ಧನಿಯಂತೆ  ಭಾವ
ಆದರೂ ಪರಿಚಿತ ಧನಿ
ಆದರೆ
ಆತ್ಮೀಯತೆಯ ಅನುಭವವಿಲ್ಲ
ಅದೇ ಹಾಸ್ಯ
ಆದರೆ ಹುಸಿನಗು
ಎಲ್ಲವೂ ಮೊದಲಿನಂತೆ
ಆದರೆ ಭಾವದ ಅಭಾವ
ಎಷ್ಟು ಪ್ರಯತ್ನಿಸಿದರೂ
ಮೂಡದ ಹಳೇ ಆತ್ಮೀಯತೆ
ವಿಷಯಗಳು ನೂರಿದ್ದರೂ
ಮಾತಾಡಲು ಮನಸಿಲ್ಲ
ಉಭಯ ಕುಶಲೋಪರಿ
ಮೌನ
ಸಮಯದ ತಿರುವು ತಂದಿತ್ತೆಲ್ಲಿಗೆ?
ಆತ್ಮೀಯತೆಯಲ್ಲದ ಆತ್ಮೀಯತೆಯಿಂದ
ಪರಿಚಿತ ಅಪರಿಚಿತತೆಯ ತುತ್ತತುದಿಗೆ!

ಮೌನ ಮುರಿವ ಕೊನೆ ಪ್ರಯತ್ನ…

ಮತ್ತೆ ಏನ್ ವಿಶೇಷ… ಇಷ್ಟ್ ವರ್ಷ ಆದ್ಮೇಲೆ call!?

Whatsapp ‘ಅಲ್ಲಿ invitation ಕಳ್ಸ್ತೀನಿ, ನನ್ ಮದ್ವೆಗೆ ಖಂಡಿತ ಬರ್ಬೇಕು ಆಯ್ತ?

ಹೌದ! Thanks for the invite. ಬರೊ ಪ್ರಯತ್ನ ಮಾಡ್ತೀನಿ 🙂 Congratulations!

About ಮಧು_ಸಿರಿ(Madhu_siri)

ನನ್ ಬಗ್ಗೆ ಒಂಚೂರು ;) ಹೆಸರು ಮಧುಶ್ರೀ. ಓದಿದ್ದು engineering ಆದ್ರೆ engineer ಅಲ್ಲ. ಬರವಣಿಗೆ ಬಗ್ಗೆ 'ಅ ಆ ಇ ಈ' ಗೊತ್ತಿಲ್ಲ . ಆದ್ರೂ ಮನಸ್ಸಿಗ್ ಅನ್ಸಿದ್ ಬರ್ಯೋದು ನನ್ ಹವ್ಯಾಸ. ಇಷ್ಟ್ ಸಾಕು ಅನ್ಸತ್ತೆ. ಇದುಕ್ಕಿಂತ ಜಾಸ್ತಿ ಹೇಳ್ಕೊಳ್ಳೊ ಅಂಥದ್ದೇನು ನಾನಿನ್ನು ಸಾಧ್ಸಿಲ್ಲ. ನಿಮ್ಮ 'ಅತ್ಯಮೂಲ್ಯ ಸಮಯಾನ' waste ಮಾಡೊ ಜಾಗ ಇದಲ್ಲ. ಬಿಡುವಿದ್ದಾಗ ಮಾತ್ರ ಮಾತ್ರ ಓದಿ ನನ್ ಕವನ ಮತ್ತೆ ಲೇಖನಗಳನ್ನ :)
This entry was posted in ಕಂಡದ್ದು, ಕೇಳಿದ್ದು,ಓದಿದ್ದು....ಅನಿಸಿದ್ದು and tagged , , . Bookmark the permalink.

Leave a comment