*ಭ್ರಮೆಯೊ ಅಥವಾ ಬದುಕೊ?*

stockvault-rainbow125740

ಕಾಮನಬಿಲ್ಲಿನ ಬಣ್ಣಗಳ ಕದ್ದು

ಕಣ್ಣರೆಪ್ಪೆಗಳ ಕುಂಚವಾಗಿಸಿ

ಭಾವನಾಲೋಕದ ಬಿಳಿ ಹಾಳೆಯೊಂದರ ಮೇಲೆ

ನಾ ಬರೆಯಲಾರಂಭಿಸಿದ ಚಿತ್ರವಿನ್ನು ಪೂರ್ತಿಯಾಗಿಲ್ಲ…

ಕಾರಣ, ಬಣ್ಣಗಳ ಕೊರತೆ!

ಖಾಲಿಯಾದ ಬಣ್ಣಗಳ ಮತ್ತೊಮ್ಮೆ ಪಡೆದು

ಚಿತ್ರ ಪೂರ್ಣಗೊಳಿಸಲು

ಮತ್ತೊಮ್ಮೆ ಕಾಮನಬಿಲ್ಲಿನ ಬರುವಿಕೆಗಾಗಿ ಕಾಯುವುದು

ಭ್ರಮೆಯೊ ಅಥವಾ ಬದುಕೊ?

About ಮಧು_ಸಿರಿ(Madhu_siri)

ನನ್ ಬಗ್ಗೆ ಒಂಚೂರು ;) ಹೆಸರು ಮಧುಶ್ರೀ. ಓದಿದ್ದು engineering ಆದ್ರೆ engineer ಅಲ್ಲ. ಬರವಣಿಗೆ ಬಗ್ಗೆ 'ಅ ಆ ಇ ಈ' ಗೊತ್ತಿಲ್ಲ . ಆದ್ರೂ ಮನಸ್ಸಿಗ್ ಅನ್ಸಿದ್ ಬರ್ಯೋದು ನನ್ ಹವ್ಯಾಸ. ಇಷ್ಟ್ ಸಾಕು ಅನ್ಸತ್ತೆ. ಇದುಕ್ಕಿಂತ ಜಾಸ್ತಿ ಹೇಳ್ಕೊಳ್ಳೊ ಅಂಥದ್ದೇನು ನಾನಿನ್ನು ಸಾಧ್ಸಿಲ್ಲ. ನಿಮ್ಮ 'ಅತ್ಯಮೂಲ್ಯ ಸಮಯಾನ' waste ಮಾಡೊ ಜಾಗ ಇದಲ್ಲ. ಬಿಡುವಿದ್ದಾಗ ಮಾತ್ರ ಮಾತ್ರ ಓದಿ ನನ್ ಕವನ ಮತ್ತೆ ಲೇಖನಗಳನ್ನ :)
This entry was posted in ಈ ಸಮಯ ಕಾವ್ಯಮಯ. Bookmark the permalink.

Leave a comment